Belagavi Dairy Premises, Kanbargi Road, BELAGAVI

0831-2405754 | 2405756 | bemulmd@gmail.com

123 456 789

info@example.com

Goldsmith Hall

New York, NY 90210

07:30 - 19:00

Monday to Friday

Chairman’s Message

ಅಧ್ಯಕ್ಷರ ನುಡಿ

ಒಕ್ಕೂಟವು ತಮ್ಮೇಲರ ಸಲಹೆ ಹಾಗೂ ಸಹಕಾರದಿಂದ ಹಾಲಿನ ಸಂಗ್ರಹಣೆ ಪ್ರಮಾಣವನ್ನು ಹೆಚ್ಚಿಸಿ, ಅಭಿವೃದ್ಧಿ ಪಥದತ್ತ ಸಾಗುತ್ತಲಿದೆ.ಶೇಖರಿಸಿದ ಹೆಚ್ಚುವರಿ ಹಾಲನ್ನು ಸಂಸ್ಕರಿಸಲುರಾಯಬಾಗದಲ್ಲಿ ನೂತನವಾಗಿ 60,000ಲೀಟರ್ ಸಾಮಥ್ರ್ಯದ (1.00ಲಕ್ಷ ಲೀಟರ್‍ವರೆಗೆ ವಿಸ್ತರಿಸಬಹುದಾದ) ಹಾಲು ಸಂಸ್ಕರಣಾಘಟಕವನ್ನು ಪ್ರಾರಂಭಿಸಿ, ರೈತರ ಸೇವೆಗೆ ಅರ್ಪಿಸಿದೆ ಮತ್ತುಕಿತ್ತೂರುತಾಲ್ಲೂಕಿನ ಹೂಲಿಕಟ್ಟಿಯಲ್ಲಿ ನೂತನ ಶೀಥಲಿಕರಣ ಕೇಂದ್ರ ನಿರ್ಮಾಣಕ್ಕೆಕ್ರಮವಿಡಲಾಗುತ್ತಿದೆ.ವರ್ಷಾಂತ್ಯಕ್ಕೆ 646 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯಚರಣೆಯಲ್ಲಿದ್ದು, ಪ್ರತಿದಿನ ಸರಾಸರಿ 181747 ಕೆ.ಜಿ ಹಾಲು ಸಂಗ್ರಹಿಸಿ, ಸರಾಸರಿ 103972ಲೀ ಹಾಲು ಮಾರಾಟ ಮಾಡಲಾಗಿರುತ್ತದೆ.

ರಾಜ್ಯದಲ್ಲಿಅತೀ ಹೆಚ್ಚು ಹಾಲು ಉತ್ಪಾದಿಸುವ ಅದರಲ್ಲಿಯೂಅತೀ ಹೆಚ್ಚು ಎಮ್ಮೆ ಹಾಲನ್ನುಉತ್ಪಾದಿಸುವ ಜಿಲ್ಲೆಬೆಳಗಾವಿ ಎಂಬುದು ಹೆಮ್ಮೆಯ ವಿಷಯ. ಅದರಲ್ಲಿ ಹೆಚ್ಚಿನ ಪ್ರಮಾಣದ ಹಾಲು ಖಾಸಗಿಯವರ ಪಾಲಾಗುತ್ತಿದೆ.ಒಕ್ಕೂಟದಲ್ಲಿ ಹಾಲು ಶೇಖರಣೆ ಹೆಚ್ಚಿಸಲು ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.ಇನ್ನೂ ಅನೇಕ ಯೋಜನೆಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ.

ಒಕ್ಕೂಟದ ಅಭಿವೃದ್ಧಿಗೆ ಸಲಹೆ, ಸಹಕಾರ ಮತ್ತು ಸಹಾಯಹಸ್ತ ನೀಡಿದಎಲ್ಲಾ ಹಾಲು ಉತ್ಪಾದಕರಿಗೆ, ಸಹಕಾರ ಸಂಘಗಳಿಗೆ, ನಂದಿನಿ ಗ್ರಾಹಕರಿಗೆ, ವಿತರಕರಿಗೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲೆಯಎಲ್ಲಾ ಪ್ರತಿನಿಧಿಗಳಿಗೆ, ಕರ್ನಾಟಕ ಹಾಲು ಮಹಾಮಂಡಳ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್, ಒಕ್ಕೂಟದ ಆಡಳಿತ ಮಂಡಲಿ ಸದಸ್ಯರಿಗೆ, ಅಧಿಕಾರಿ/ಸಿಬ್ಬಂದಿಗಳಿಗೆ ಮತ್ತುಎಲ್ಲಾ ಮಹನೀಯರಿಗೆ ಅನಂತ ಧನ್ಯವಾದಗಳು.

ಜೈ ಹಿಂದ್   ಜೈಕರ್ನಾಟಕ   ಜೈ ಸಹಕಾರ

ಇಂತಿ ತಮ್ಮ ಸಹಕಾರಿ
ಶ್ರೀ. ಬಾಲಚಂದ್ರ. ಎಲ್.ಜಾರಕಿಹೊಳಿ
ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿ,
ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು
ಕರ್ನಾಟಕ ಸರ್ಕಾರ.

Change Language »